Sampradaayada Haadu on Goddess Gowri Lyrics:
ಪೂಜಿಸುವೆನು ದೇವಿಯ ಶ್ರೀನಿತ್ಯಗೌರಿಯ
ಪೂಜಿಸುವೆನು ದೇವಿಯ ||
ಮೃಗಧರ ಮೌಳಿಯ ಜಗದೋದ್ಧಾರಂಬೆಯ
ನಿಗೆ ಮನದಲಿ ಧ್ಯಾನಿಸಿ ಆಚಮನವನಿತ್ತು ||
ಪಂಚಮ ವಾಣಿಯ ಪಂಚರಿಕಾಂಬೆಯ
ಪಂಚತತ್ವದಿ ಜಲದಿ ಮುದದಿಂದ ತೊಳೆಯುತ ||
ಸುಂದರಹಾಸೆಯ ಸೌಂದರ್ಯಲಹರಿಯ
ಚಂದ್ರಧಾರಿಯ ಉಡಿಸಿ ಕಂಚುಕವ ತೊಡಿಸಿ ||
ಜಯಜಯ ಮಾತೆಯ ಜಯಜಯ ಗೌರಿಯ
ಜಯದೇವಿ ಕರುಣಿಸು ನೀ ವರಪ್ರಸಾದವನು ||
pUjisuvenu dEviya SrInityagouriya
pUjisuvenu dEviya ||
mRugadhara mouLiya jagadOddhAraMbeya
nige manadali dhyAnisi Achamanavanittu ||
paMchama vANiya paMcharikAMbeya
paMchatatvadi jaladi mudadiMda toLeyuta ||
suMdarahAseya souMdaryalahariya
chaMdradhAriya uDisi kaMchukava toDisi ||
jayajaya mAteya jayajaya gouriya
jayadEvi karuNisu nI varaprasAdavanu ||
ಬೆಳಗುವೆನಾರತಿಯ ಶ್ರೀಗೌರಿಗೆ
ರಜತಗಿರಿಯಲಿ ವಾಸಿಪ ದೇವಿಗೆ |ಬೆಳಗುವೆನಾರತಿಯಾ ||
ಸೇವೆಯನರಿಯದ ಭಾವುಕ ಜನರಿಗೆ
ಭಾವನೆಯಿಂದಲಿ ವರವೀವಳಿಗೆ |ಬೆಳಗುವೆನಾರತಿಯಾ ||
ಭಕುತರ ಸೇವೆಗೆ ಮುಕುತಿಯ ನೀಡುವ
ಸಕಲಾಭರಣೆಗೆ ಪಾವನ ಚರಿತೆಗೆ |ಬೆಳಗುವೆನಾರತಿಯಾ ||
ಬಿಂಕದಿ ಮೆರೆವರ ಬಿಂಕವ ಮುರಿಯುವ
ಶಂಕರ ಶಿವನ ರಾಣಿಗಾನಂದದಿ |ಬೆಳಗುವೆನಾರತಿಯಾ ||
beLaguvenAratiya SrIgourige
rajatagiriyali vAsipa dEvige |beLaguvenAratiyA ||
sEveyanariyada bhAvuka janarige
bhAvaneyiMdali varavIvaLige |beLaguvenAratiyA ||
bhakutara sEvege mukutiya nIDuva
sakalAbharaNege pAvana charitege |beLaguvenAratiyA ||
biMkadi merevara biMkava muriyuva
shaMkara shivana rANigAnaMdadi |beLaguvenAratiyA ||
ಪಾಹಿ ಪಾರ್ವತಿ ನಿನಗೆ ಮಾಡುವೆನಾರತಿ
ಪಾಲಿಸೆಂದು ಪದಕೆ ಎರಗಿ ಸ್ತುತಿಸಿ ಬೇಡುವೆ ||
ಪರ್ವತಸುತೆ ಪರಮೇಶನ ಸತಿ
ಗಿರಿಜೆ ನಿನಗೆ ಹರಳಿನಾರತಿ ಹರುಷದಿಂದಲಿ ||
ಅಂಬುಜಾಂಬಕಿ ಅಂಬ ಕಂಬುಕಂಧರಿ
ರಂಭೆ ನಿನಗೆ ಹರಳಿನಾರತಿ ಹರುಷದಿಂದಲಿ ||
ಶಕ್ತಿರೂಪಳೆ ಅಂಬ ಮುಕ್ತಿದಾಯಕಿ
ತಪ್ಪ ಕ್ಷಮಿಸಿ ರಕ್ಷಿಸೆನ್ನ ಸರ್ಪವೇಣಿಯೆ ||
pAhi pArvati ninage mADuvenArati
pAliseMdu padake eragi stutisi bEDuve ||
parvatasute paramEshana sati
girije ninage haraLinArati haruShadiMdali ||
aMbujAMbaki aMba kaMbukaMdhari
raMbhe ninage haraLinArati haruShadiMdali ||
shaktirUpaLe aMba muktidAyaki
tappa kShamisi rakShisenna sarpavENiye ||