Ganesh Stotram

Maha Ganapathe Mathangavadana Lyrics in Kannada

Jaya Jaya Swamin Jaya Jaya Lyrics:

ರಾಗ: ಅಭೇರಿ ತಾಳ: ಆದಿ

ಮಹಾಗಣಪತೇ ಮಾತಂಗವದನ
ಮೂಷಿಕವಾಹನ ಮಂಗಳಚರಣ ||

ವಿನಾಯಕ ನೀ ವಿಘ್ನಕೋಟಿ ಹರಣ
ವಾಮನರೂಪ ವಲ್ಲಭನೇ
ಷಣ್ಮುಖಸೋದರ ಸುರಮುನಿಪೂಜಿತ
ಶರಣೆಂಬೆ ನಿನಗೆ ಶಂಭುಕುಮಾರ || ೧ ||

ಲಂಬೋದರನೇ ಲಕುಮೀಕರನೇ
ಅಂಬಾಸುತನೇ ಆದಿಪೂಜ್ಯನೇ
ದಶಭುಜರೂಪನೆ ದೂರ್ವಾಪ್ರಿಯನೆ
ದುರಿತನಿವಾರಣ ದೀನರಕ್ಷಣ || ೨ ||

ಪಾಶಾಂಕುಶಧರ ಪಾಪವಿಮೋಚನ
ಪಾವನಸ್ಮರಣ ಪತಿತಪಾವನ
ಜಗದೊಳು ನಿನ್ನಯ ನಾಮವ ಪೊಗಳುವೆ
ಜಯರಾಮ ವಿಠ್ಠಲಗೆ ನೀ ಅತಿಪ್ರಿಯನೆ || ೩ ||

Jaya Jaya Swamin Jaya Jaya Lyrics in English:

Add Comment

Click here to post a comment